ಸಂಶೋಧನೆ ಮತ್ತು ವಿಸ್ತರಣೆ
- ಪುಣಜನೂರು ಪಂಚಾಯಿತಿ ಗ್ರಾಮಗಳ ಯುವಜನರ ಅಧ್ಯಯನ (ಪಿಡಿಎಫ್ ಕನ್ನಡ)
- ಚಾಮರಾಜನಗರ ಜಿಲ್ಲೆಯ ಪುಣಜನೂರಿನ ಗ್ರಾಮೀಣ ಸಮುದಾಯಗಳ ಅಧ್ಯಯನ (ಪಿಡಿಎಫ್ ಕನ್ನಡ)
- ಹೊಸ ಗುತ್ತಿಗೆ ವ್ಯವಸಾಯ ಮತ್ತು ಅದರ ಪರಿಣಾಮಗಳು (ನೆರವು ರಿವಿಟಲೈಸಿಂಗ್ ರೈನ್ಫೆಡ್ ಅಗ್ರಿಕಲ್ಚರ್, ಹೈದರಬಾದ್) (ಪಿಡಿಎಫ್ ಕನ್ನಡ), (ಪಿಡಿಎಫ್ ಆಂಗ್ಲಭಾಷೆ)
- ಗ್ರಾಮೀಣ ಯುವಜನರ ಸಮಗ್ರ ಕಲಿಕೆಯ ಪಠ್ಯಕ್ರಮ ಅಭಿವೃದ್ಧಿ (ಡೆವಲಪಿಂಗ್ ಎ ಕರಿಕುಲಮ್ ಫಾರ್ಇಂಟಿಗ್ರೇಟೆಡ್ ಲರ್ನಿಂಗ್ ಅಮಾಂಗ್ ರೂರಲ್ ಯೂತ್).
- ಕರ್ನಾಟಕದ ಬರಗಾಲ ಕುರಿತ ಲೇಖನ ೨೦೧೬-೧೭.(ಪಿಡಿಎಫ್ ಕನ್ನಡ), (ಪಿಡಿಎಫ್ ಆಂಗ್ಲಭಾಷೆ)
- ಉಪ್ಸಾರು- ಚಾಮರಾಜನಗರ ಜಿಲ್ಲೆ ಪಾಕ ವಿಧಾನ (ಮುಖಪುಟ).
- ನಿಜರು : ಆದಿವಾಸಿ ಜೀವನ ಮತ್ತು ಶಿಕ್ಷಣದ ಸ್ಥಿತ್ಯಂತರಗಳು, ಖುಷಿ ಪ್ರಕಾಶನ, ಹಾಸನ.
- ದಿ ಡಿಸ್ಪ್ಲೇಸ್ಡ್ ಥ್ರೆಶಿಂಗ್ ಯಾರ್ಡ್ : ಇನ್ವಾಲಿವೇಷನ್ ಆಫ್ ದಿ ರೂರಲ್, ಡೆವಲಪ್ಮೆಂಟ್ ಅಂಡ್ ಚೇಂಜ್, ಸೇಜ್ ಪಬ್ಲಿಕೇಷನ್. ೨೦೧೯
- ಸ್ಕೂಲ್ ಡಿಫ್ರೆನ್ಸಿಯೇಷನ್ , ದಿ ಇಂಡಿಯಾ ಫೋರಂ, ಮೇ.೨೦೧೯.
ಯುವಜನರು ಮತ್ತು ಪ್ರಜಾಪ್ರಭೂತ್ವ, ಗ್ರಾಮೀಣ ವಿಷಯಗಳು, ಕೃಷಿಗೆ ಸಂಬಂಧಿಸಿದ ವಿಷಯಗಳ ಸಂಶೋಧನೆ ಮಾಡುವುದನ್ನು ಮುಂದುವರಿಸಲಾಗಿದೆ. ಆಶ್ರಮಶಾಲೆಗಳಿಗೆ ಸಂಬಂಧಿಸಿದಂತೆ ಬದ್ರಿ ಪುಸ್ತಕ ಪ್ರಕಟವಾಗಿದ್ದು, ಕೆಲವು ಸರ್ಕಾರಿ ಶಾಲೆಗಳ ಸಮಗ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುನರ್ ವಿಮರ್ಶೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಓಡಿ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು (ಪ್ರೀತಿಸಿ ಮದುವೆ ಆಗುವುದು, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗಳ) ಅವುಗಳ ಬಗ್ಗೆ ಆಳವಾದ ಅವಲೋಕನ ಮಾಡಲಾಗುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ಕುಟುಂಬಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದು, ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಚಲನೆ, ಜನರ ಹೆಬ್ಬಯಕೆ ಮತ್ತು ಲಿಂಗತ್ವದ ವಿಷಯಗಳ ಬಗ್ಗೆ ಗಮನ ನೀಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಸ್ಥಿತಿ ಮತ್ತು ಹವಮಾನ ಬದಲಾವಣೆ ಬಗ್ಗೆ ದಾಖಲಾತಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಹಂತದ ಸರ್ಕಾರಿ ನೀತಿ, ನಿರೂಪಕರು ಮತ್ತು ಅನುಷ್ಟಾನ ಮಾಡುವವರ ಜೊತೆ ಈ ವಿಷಯಗಳನ್ನು ಹಂಚಿಕೊಳ್ಳಲಾಗುವುದು. ಮಾರ್ಚ್ ೨೦೧೯ ರ ಕೊನೆಯಲ್ಲಿ ಜಿಲ್ಲೆಯ ಯುವಜನರ ಜೊತೆ ಪ್ರಜಾಪ್ರಭುತ್ವ ವಿಷಯಗಳ ಮೇಲೆ ಸಭೆ ಮಾಡಲಾಗಿದ್ದು, ಪ್ರಜಾಪ್ರಭುತ್ವ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಹಂತದಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸಲಾಗುವುದು. ಮುಂದಿನ ವರ್ಷದಲ್ಲಿ ಪ್ರಜಾಪ್ರಭುತ್ವ ಮತ್ತು ಭಾರತದ ಅಭಿವೃದ್ಧಿಯ ಸವಾಲುಗಳ ಬಗ್ಗೆ ಕೈಪಿಡಿ ಸಿದ್ಧಪಡಿಸಲಾಗುವುದು. ತಂಡದ ಸದಸ್ಯರು ಪ್ರಸ್ತುತದ ಸಾಮಾಜಿಕ-ರಾಜಕೀಯ ಸ್ಥಿತಿ ಬಗ್ಗೆ, ಸಾಮಾಜಿಕ ಶಿಕ್ಷಣಶಾಸ್ತ್ರ ಮತ್ತು ಕೃಷಿ ವಿಷಯಗಳನ್ನು ನಿರಂತರವಾಗಿ ದಾಖಲು ಮಾಡಿ, ಬರೆಯುವ ಮತ್ತು ಪ್ರಕಟಣೆ ಮಾಡುವ ಕೆಲಸ ಮುಂದುವರಿಸುವರು. ಸಾವಯವ ಕೃಷಿ ಬಗ್ಗೆ ನಿರಂತರವಾಗಿ ರೈತರ ಜೊತೆ ಸಭೆಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಲಾಗುತ್ತಿದೆ. ನಮ್ಮ ಕಛೇರಿ ಇರುವ ನಾಗವಳ್ಳಿ ಗ್ರಾಮದಲ್ಲಿ ನೀರು ಸಂರಕ್ಷಣೆ, ಕಸ ವಿಲೇವಾರಿ, ಕೈ ತೋಟ ನಿರ್ಮಾಣದ ಮುಖ್ಯತೆಯನ್ನು ತಿಳಿಸಲಾಗುತ್ತಿದೆ. ಸಮಗ್ರ ಕಲಿಕಾ ಕಾರ್ಯಾಕ್ರಮದ ಯುವಜನರ ಜೊತೆ ಪ್ರಜಾಪ್ರಭುತ್ವ ವಿಕೇಂದ್ರೀಕರಣವನ್ನು ಮುಂದುವರಿಸಲಾಗುತ್ತದೆ.