ಸಿರಿಧಾನ್ಯಗಳ ಕಾರ್ಯಕ್ರಮ
ಒಣ ಬೇಸಾಯ ಪ್ರದೇಶಗಳಲ್ಲಿ (ನಾಗವಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ) ಸಿರಿಧಾನ್ಯಗಳನ್ನು ಹಿಂದೆ ಹೇಗೆ ಬೆಳೆಯುತ್ತಿದ್ದರು, ಆ ಪದ್ಧತಿಯನ್ನು ಮತ್ತು ಸಿರಿಧಾನ್ಯ ಬೆಳೆಯುವಂತೆ ಮಾಡುವುದು ಹೇಗೆ ಎಂಬ ಆಲೋಚನೆಯೊಂದಿಗೆ ೨೦೧೬ ರಲ್ಲಿ ಈ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದೆ. ಸ್ಥಳೀಯವಾಗಿಈ ಒಣ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಇರುವ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಸ್ಥಳೀಯ ಬಿತ್ತನೆ ಬೀಜಗಳನ್ನು ಕಳೆದುಕೊಂಡಿರುವ ಬಗ್ಗೆ ಅರ್ಥ ಮಾಡಿಸುವುದು ಮತ್ತು ಹೊಸ ವಿಧಾನಗಳು ಮತ್ತು ತರಬೇತಿ ಮೂಲಕ ಆರ್ಥಿಕವಾಗಿ ಸದೃಢತೆ ಮತ್ತು ಸುಸ್ಥಿರ ಪರಿಸರ ನಿರ್ಮಾಣ, ವಾತವರಣದ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಗಳನ್ನು ಬದಲಾಸಿಕೊಳ್ಳಬೇಕಾದ ಪ್ರಾಮುಖ್ಯತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಒಳಗೊಂಡ ಕೆಲವು ಮುಖ್ಯ ಆರ್ಥಿಕಾಂಶಗಳನ್ನು ಒಳಗೊಂಡಿದೆ. ಈ ವಿಷಯದ ಮುಖ್ಯ ಸಂಪನ್ಮೂಲ ವ್ಯಕ್ತಿ ಮತ್ತು ಸಲಹಾಗಾರರಾಗಿ ಡಾ.ದ್ವಿಜೇಂದ್ರನಾಥ್ ಗುರು ಇದ್ದಾರೆ.