ಪುನರ್ಚಿತ್ (ಪುನರ್ ಆಲೋಚನೆ) ಪರ್ಯಾಯ ದೃಷ್ಟಿಕೋನಗಳ ಮೌಲ್ಯಮಾಪನದ ಜೊತೆ ಶಿಕ್ಷಣ, ಪರಿಸರ, ಪ್ರಜಾಪ್ರಭುತ್ವ ಮತ್ತು ಸಮಾಜವನ್ನು ಕುರಿತ ಚಟುವಟಿಕೆಗಳನ್ನು ಒಳಗೊಂಡು ಸಾಮೂಹಿಕವಾಗಿ ಕೆಲಸ ಮಾಡುತ್ತಿದೆ. ಪುನರ್ಚಿತ್ ಸಮಾನ ಹಾಗೂ ನ್ಯಾಯಬದ್ಧ ಸಮಾಜವನ್ನು ರೂಪಿಸುವ ದಿಕ್ಕಿನಲ್ಲಿ ಕೆಲಸ ಮಾಡುವ ಉದ್ದೇಶವನ್ನು ಒಳಗೊಂಡಿದೆ. ಗ್ರಾಮೀಣ ಭಾರತದ ಪ್ರತಿನಿತ್ಯ ಜೀವನಕ್ಕೆ ಸರಿಹೊಂದುವ ಆಲೋಚನೆಗಳಿಗೆ ಅಸ್ತಿಭಾರದ ಮುನ್ನುಡಿ ಬರೆಯುತ್ತದೆ.

ಕೋವಿಡ್ -19 ರ ಸಂದರ್ಭದಲ್ಲಿ

ಕೊರೊನಾ ಲಾಕ್ ಡೌನ್ ಆಕಸ್ಮಿಕವಾಗಿ ಬಂದೆರಗಿದ ಆಪತ್ತಾಗಿದ್ದು, ಪುನರ್ಚಿತ್ ತಂಡ ನಗರ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನೆರವು ನೀಡುವ ಜೊತೆಗೆ ನಗರದಿಂದ ತಮ್ಮ ಹಳ್ಳಿಗೆ ವಾಪಸ್ಸಾದವರು ಮತ್ತು ರೈತರ ಸ್ಥಿತಿಗತಿ ಕುರಿತ ಅಧ್ಯಯನ, ಲಾಕ್ ಡೌನಿಂದ ಗ್ರಾಮೀಣ ಪ್ರದೇಶಗಳಲ್ಲಿ ತೊಂದರೆಗೆ ಸಿಲುಕಿದ ಹಿರಿಯರು, ವಿಧವೆಯರು, ಅನಾರೋಗ್ಯಕ್ಕೆ ತುತ್ತಾದವರಿಗೆ ನೆರವು, ಜಿಲ್ಲಾ ಮತ್ತು ಆಯ್ದ ಗ್ರಾಮ ಪಂಚಾಯತ್ ಜೊತೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಕೆಲಸಗಳ ಅನುಷ್ಟಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಬೀಜ ಸಂಗ್ರಹ ಮತ್ತು ಸಂರಕ್ಷಣೆ

ಪುನರ್ಚಿತ್ ಬೀಜ ಸಂಗ್ರಹದಲ್ಲಿ 29 ವಿವಿಧ ಬಗೆಯ ತರಕಾರಿ ಬೀಜಗಳು, 11 ಬಗೆಯ ದ್ವಿ-ದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳಿವೆ. ಬೀಜಗಳ ವಾಣಿಜ್ಯ ಮಾರಾಟವನ್ನು ಪರಿಗಣಿಸಿಲ್ಲ. ನಾಗವಳ್ಳಿಯ ಮಕ್ಕಳು ಬೀಜ ಉಳಿಸುವ ಕೆಲಸ ಮಾಡುತ್ತಿದ್ದು, ಪ್ರೋತ್ಸಾಹಿಸಲಾಗುತ್ತಿದೆ.

ಆದಿ : ಸೋಲೆಗರ ಅಂತರ್-ತಲೆಮಾರುಗಳ ಜ್ಞಾನ ಹಂಚಿಕೆ

ಸ್ಥಳೀಯ ಜ್ಞಾನವನ್ನು ಪುರುಜ್ಜೀವನಗೊಳಿ ಬಲಪಡಿಸುವ ಮೂಲಕ ಸೋಲೆಗ ತಲೆಮಾರುಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದು. ಈ ಜ್ಞಾನ ವ್ಯಕ್ತಿ, ಕುಟುಂಬ ಮತ್ತು ಸೋಲೆಗರ ಸಮುದಾಯಗಳಿಗೆ ಸ್ವಾತಂತ್ರ ಮತ್ತು ಸ್ವಾವಲಂಬನೆ ಮಾಡಿಕೊಡುತ್ತದೆ.

ಅನಿಕೇತನ : ಮಕ್ಕಳ ಕಾರ್ಯಕ್ರಮ

ಮಕ್ಕಳಿಗೆ ಸೃಜನಾತ್ಮಕವಾದ ಚಟುವಟಿಕೆಗಳು, ಆಟಗಳು, ಕರಕೌಶಲ್ಯ ಮತ್ತು ಚಿತ್ರ ಕಲೆಯ ಮೂಲಕ ಕಲಿಸಲಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೊರಗಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನಾಟಕ ಮತ್ತು ಚಿತ್ರಕಲೆ ಮೂಲಕ ಶಿಬಿರವನ್ನು ನಡೆಸಲಾಗುತ್ತದೆ.

ಸಮಗ್ರ ಕಲಿಕಾ ಕಾರ್ಯಕ್ರಮ

ಸಮಗ್ರ ಕಲಿಕಾ ಕಾರ್ಯಕ್ರಮದ ಮೂಲಕ ಏಳು (೦೭) ತಿಂಗಳ ತರಬೇತಿಯನ್ನು ನೀಡಲಾಗುತ್ತಿದೆ (ತಿಂಗಳಲ್ಲಿ ೧೦ ದಿನಗಳು), ಈ ತರಬೇತಿಯಲ್ಲಿ ಗ್ರಾಮೀಣ ಯುವಜನರು ಅರ್ಥಪೂರ್ಣ ಜೀವನ ನಡೆಸುವುದು ಹೇಗೆ ಎಂಬ ವಿಷಯವನ್ನು ಕೇಂದ್ರಿಕರಿಸಲಾಗುತ್ತಿದೆ.

ಕಲಿಕೆ ಮತ್ತು ಸಂಪನ್ಮೂಲ ಕೇಂದ್ರ

ಈ ಕೇಂದ್ರದಲ್ಲಿ ಮಕ್ಕಳು ಮತ್ತು ಯುವಜನರಿಗೆ ಸೃಜನಶೀಲ ಕಲೆಗಳನ್ನು ಕಲಿಸುವ ಪುಸ್ತಕಗಳು ಲಭ್ಯವಿದೆ. ಈ ಕೇಂದ್ರದ ಕೈತೋಟವು ವಿವಿಧ ತರಕಾರಿಗಳು, ಹಣ್ಣುಗಳನ್ನು ಬೆಳೆಯುವ ಮತ್ತು ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆಯನ್ನು ಒಳಗೊಂಡಿದೆ.

ಸಂಶೋಧನೆ ಮತ್ತು ವಿಸ್ತರಣೆ

ಸಂಶೋಧನಾ ಕಾರ್ಯಕ್ರಮಗಳಲ್ಲಿ ಚಾಮರಾಜನಗರ ಜಿಲ್ಲೆಯ ಬರಗಾಲ ಪರಿಸ್ಥಿತಿಯ ಅಧ್ಯಯನ ಮುಂದುವರಿದಿದ್ದು, ಪಾಳುಬಿದ್ದ ಭೂಮಿ ಕುರಿತ ಲೇಖನದ ಮೂಲಕ ಉಳುಮೆ ಮಾಡದ ಭೂಮಿಯ ಬೆಳವಣಿಗೆಯನ್ನು ಗುರುತಿಸುವುದು ಮತ್ತು ಯುವಜನರಿಗೆಸಾಮಾಜಿಕ ವಿಷಯಗಳ ಬೋಧನೆಯ ಕೈಪಿಡಿ ಸಿದ್ಧಪಡಿಸಲಾಗುತ್ತಿದೆ.

ಹೊನ್ನೇರು

ಸಮಗ್ರ ಕಲಿಕಾ ಕಾರ್ಯಕ್ರಮದ ತರಬೇತಿಯನ್ನು ಪಡೆದ ಹಳೆಯ ಸದಸ್ಯರು ಸಂಪರ್ಕ ಜಾಲದ ಮೂಲಕ ಸಂಘಟನೆಯಾಗಿದ್ದಾರೆ. ಸಹಕಾರ ಮಾದರಿಯಲ್ಲಿ ಉತ್ಪನ್ನಗಳಿಗೆ ನೆರವು ಒದಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಜೊತೆಗೆ ವ್ಯವಸಾಯ ಕ್ಷೇತ್ರದಲ್ಲಿ ಪರಸ್ಪರ ಕೆಲಸಗಳಲ್ಲಿ ನೆರವಾಗುವುದು (ಮುಯ್ಯಿ ಆಳು ಮತ್ತು ಬೀಜ ಹಂಚಿಕೆ). ತಮ್ಮಲ್ಲಿ ಬೆಳೆದ ವ್ಯವಾಸಯ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು.

ಅಂಗರಿಕೆ ಮಾಳ

ಈ ಭೂಮಿಯನ್ನು ಪುನರುಜ್ಜೀವನಗೊಳಿಸಿ ಸಮಗ್ರ ಕಲಿಕಾರ್ಥಿಗಳು, ರೈತರು ಮತ್ತು ಆಸಕ್ತ ಜನರಿಗೆ ಮಾದರಿ ಪ್ರಾತ್ಯಕ್ಷಿಕ ಸ್ಥಳವಾಗಿ ರೂಪಿಸಲಾಗುವುದು. ಮುಂದಿನ ನಮ್ಮ ಯೋಜನೆಯಲ್ಲಿ ಭೂಮಿಯನ್ನು ಪುನಶ್ಚೇತನಗೊಳಿಸಿ ಕೃಷಿ-ಜೀವವೈವಿಧ್ಯತೆಯ ಸರಂಕ್ಷಣೆಯ ಪ್ರಾತ್ಯಕ್ಷಿಕ ಸ್ಥಳವಾಗಿ ಬದಲಾಯಿಸಲಾಗುತ್ತದೆ ಮತ್ತು ಸ್ಥಳೀಯರಿಗೆ ಮತ್ತು ಸ್ಥಳೀಯರೇತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಪುನರ್ಚಿತ್

ಬಿ.ಆರ್.ಹಿಲ್ಸ್ ರಸ್ತೆ,
ನಾಗವಳ್ಳಿ ಗ್ರಾಮ ಮತ್ತು ಅಂಚೆ
ಚಾಮರಾಜನಗರ ಜಿಲ್ಲೆ ೫೭೧೩೪೨
ಇಮೇಲ್ : punarchithcollective@gmail.com
ದೂರವಾಣಿ: ೯೪೮೩೬೦೨೧೫; ೮೭೬೨೮೪೨೨೫೩