ಆದಿ : ಸೋಲೆಗರ ಅಂತರ್-ತಲೆಮಾರುಗಳ ಜ್ಞಾನ ಹಂಚಿಕೆ


ಸ್ಥಳೀಯ ಜ್ಞಾನವನ್ನು ಪುರುಜ್ಜೀವನಗೊಳಿ ಬಲಪಡಿಸುವ ಮೂಲಕ ಸೋಲೆಗ ತಲೆಮಾರುಗಳ ನಡುವಿನ ಸಂಬAಧವನ್ನು ಗಟ್ಟಿಗೊಳಿಸುವುದು. ಈ ಜ್ಞಾನ ವ್ಯಕ್ತಿ, ಕುಟುಂಬ ಮತ್ತು ಸೋಲೆಗರ ಸಮುದಾಯಗಳಿಗೆ ಸ್ವಾತಂತ್ರ ಮತ್ತು ಸ್ವಾವಲಂಬನೆ ಮಾಡಿಕೊಡುತ್ತದೆ. ಸಮುದಾಯ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಮೂಲಕ, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳನ್ನು ಪರಿಹರಿಸಲು ಸಹಾಯವಾಗುತ್ತದೆ. ಸೋಲೆಗರು ತಮ್ಮ ಸ್ಥಳೀಯ ಸಂಪನ್ಮೂಗಳು ಮತ್ತು ಸ್ಥಳವನ್ನು ಸಂರಕ್ಷಿಸಬಹುದು. ಸಮೀರಾ ಅಗ್ನಿಹೋತ್ರಿ ಆದಿ ಕಾರ್ಯಕ್ರಮ ಸಂಯೋಜಕರಾಗಿದ್ದು, ಲಕ್ಷ್ಮಿ ಕ್ಷೇತ್ರ ಸಂಘಟಕರಾಗಿದ್ದಾರೆ. ಮಾಹಿತಿ ಸಂಗ್ರಹ ಮತ್ತು ಹಂಚಿಕೆಯ ತಂಡದಲ್ಲಿ ಗೌರಿ, ರಾಜಮ್ಮ, ವೀರೇಗೌಡ, ನಾಗೇಶ, ಲಕ್ಷ್ಮಿ .ಪಿ, ಹಾಗೂ ಮಹೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದಿ ಕಾರ್ಯಕ್ರಮದ ಸಲಹಾಗಾರರಾಗಿ ಸಿ.ಮಾದೇಗೌಡರಿದ್ದು, ಬಿ.ಆರ್.ಹಿಲ್ಸ್ನ ನಂಜಮ್ಮ, ಕನ್ನೇರಿ ಕಾಲೋನಿಯ ರಂಗಮ್ಮ, ಮಸಣಮ್ಮ, ಬಾನವಾಡಿಯ ಚೆನ್ನಂಜಮ್ಮ, ಮಾದಮ್ಮ, ಮಸಣಮ್ಮ, ಮಾದಪ್ಪಿಗೌಡ, ಕುಳ್ಳೂರಿನ ನಾಗಮ್ಮ ಸೋಲೆಗರ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
