2022 ಕಾರ್ಯಕ್ರಮಗಳು
ಆದಿ : “ಕಾಡಿನ ಗೇನ” ಯೂ ಟೂಬ್ ಚಾನೆಲ್ ಉದ್ಘಾಟನೆ
ಜೂನ್ 03, 2022
ಸೋಲಿಗರ ಅಂತರ-ತಲೆಮಾರಿನ ಜ್ಞಾನವನ್ನು ಹಿರಿಯರಿಂದ ಕಿರಿಯರಿಗೆ ತಲುಪಿಸಿ ಕಲಿಸುವುದು ಮತ್ತು ಮುಂದಿನ ಪೀಳಿಗೆಗೆ ಈ ಗೇನಾವನ್ನು ಉಳಿಸುವ ನಿಟ್ಟಿನಲ್ಲಿ ದೃಶ್ಯ, ಶ್ರವ್ಯ ಹಾಗೂ ಮುದ್ರಣ (ವಿಡಿಯೋ, ಆಡಿಯೋ, ಪ್ರಿಂಟ್) ಮಾಧ್ಯಮದ ಮೂಲಕ ಹಂಚಿಕೊಳ್ಳುವ ಕೆಲಸವನ್ನು ಪುನರ್ಚಿತ್ ಮಾಡುತ್ತಿದೆ. ಇದರ ಭಾಗವಾಗಿ ಜೂನ್ 3 ರಂದು “ಸೋಲಿಗರ ಕಾಡಿನಗೇನ” ಯೂಟೂಬ್ ಚಾನೆಲ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಕಾರ್ಯದರ್ಶಿಯಾದ ಸಿ.ಮಾದೇಗೌಡ, ಸಂಘದ ಸದಸ್ಯರು, ವಿವಿಧ ಗ್ರಾಮಗಳ ಹಲವು ಪ್ರತಿನಿಧಿಗಳು ಸೇರಿ 60 ಜನ ಭಾಗವಹಿಸಿದರು. ಈ ಕಾರ್ಯಕ್ರಮದ ಬಗ್ಗೆ ಸಂಘದವರು, ಭಾಗವಹಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿ, ಈ ಕಾರ್ಯಕ್ರಮದ ಯಶಸ್ಸಿನಲ್ಲಿ ತಾವು ಕೈ ಜೋಡಿಸುವುದಾಗಿ ತಿಳಿಸಿದ್ದಾರೆ. ಈ ಯೂಟೂಬ್ ಚಾನೆಲ್ ಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಿ, ಸಲಹೆಗಳನ್ನು ನೀಡಲು ಸೋಲಿಗರ ಸಂಘದ ಪ್ರತಿನಿಧಿಗಳು ಮತ್ತು ಪುನರ್ಚಿತ್ ತಂಡದ ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಅನುಮೋದಿಸಿದ ಆಡಿಯೋ, ವಿಡಿಯೋ ಹಾಗೂ ಮುದ್ರಣಗಳನ್ನು ಮಾತ್ರ ಪ್ರಕಟ ಮಾಡಲಾಗುತ್ತದೆ.
ILP 8ನೇ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ
ಮೇ 16, 2022 :
ಐಎಲ್‌ಪಿ 8ನೇ ಬ್ಯಾಚ್ ಮೇ 16 ರಂದು ಪ್ರಾರಂಭವಾಗಿ, ಮೇ 17, 18 ವರೆಗೆ ಮುಂದುವರಿಯಿತು. ಕರ್ನಾಟಕದ ವಿವಿಧ ಭಾಗಗಳಿಂದ ಆಸಕ್ತಿ ಇರುವ ಸರಾಸರಿ 27-30 ವಯೋಮಾನದ 22 ಯುವಜನರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ 10 ಮಹಿಳೆಯರು, 12 ಪುರುಷರಿದ್ದಾರೆ. ಈ ಸಲದ ತರಬೇತಿ ವಸತಿ ಸಹಿತ ತರಬೇತಿಯಾಗಿದೆ. ಮೂರು ದಿನದ ತರಬೇತಿಯಲ್ಲಿ ಬರ್ಟಿ ಒಲಿವೆರಾ, ವಾಸವಿ ಮತ್ತು ಬದ್ರಿ ಅವರು ಪರಿಚಯಾತ್ಮಕ ಚಟುವಟಿಕೆಗಳ ಜೊತೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು, ಗ್ರಾಮೀಣ ಮತ್ತು ಕೃಷಿ ಭಾರತದ ಸ್ಥಿತಿಗತಿ ವಿಷಯಗಳನ್ನು ಹಂಚಿಕೊAಡರು. ಕಲಿಕಾರ್ಥಿಗಳ ಜೊತೆ ಮುಂಬರುವ ಅವಧಿಗಳ ವೇಳಾಪಟ್ಟಿ ಸಿದ್ಧಪಡಿಸಿದ್ದು, 6 ವಾರಗಳಿಗೆ ಒಂದು ಸಲ ಮೂರು ದಿನಗಳಂತೆ 5 ಹಂತದ ತರಬೇತಿಗೆ ಹಾಜರಾಗಲು ಚರ್ಚಿಸಲಾಗಿದೆ. ಮುಂಬರುವ ತರಬೇತಿ ಅವಧಿಗಳಿಗೆ ಪುನರ್ಚತ್ ಪರಿಚಯ ವಲಯ ಮತ್ತು ಹೊರಗಿನ ಸಂಪನ್ಮೂಲ ವ್ಯಕ್ತಿಗಳ ಜೊತೆ ಮಾತನಾಡುವ ಜವಾಬ್ದಾರಿಗಳನ್ನು ವಾಸವಿ ಮತ್ತು ಬದ್ರಿ ಮಾಡುತ್ತಾರೆ.
ಮಕ್ಕಳ ಬೇಸಿಗೆ ಶಿಬಿರ, ಮೇ 6 ರಿಂದ 8, 2022 :
ನಾಗವಳ್ಳಿ ಮಕ್ಕಳಿಗಾಗಿ ಮೇ 6 ರಿಂದ 8 ರವರೆಗೆ 3 ದಿನಗಳ ಬೇಸಿಗೆ ಶಿಬಿರನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಸುಮಾ, ಸುಚಿತ್ರಾ ಮತ್ತು ಸುಗಿತಾ ಭಾಗವಹಿಸಿದ್ದು, ಪುನರ್ಚಿತ್ ತಂಡದಿAದ ಸುಂದ್ರಮ್ಮ, ಮನುಜ, ವಿನಯ್ ಮತ್ತು ಚಂದ್ರು ಮಕ್ಕಳ ಚಟುವಟಿಕೆ ಮತ್ತು ನಿರ್ವಹಣೆಯಲ್ಲಿ ನೆರವಾದರು. ಮಕ್ಕಳಿಗೆ ಅವರ ಸುತ್ತಲಿನ ವಿಷಯಗಳ ಬಗ್ಗೆ ಕುತೂಹಲ ಮೂಡಿಸುವ ಮತ್ತು ಸಂತಷದಾಯಕ ಕಲಿಕೆಗೆ ಅವರನ್ನು ತೆರೆದುಕೊಳ್ಳಲು ಹಲವಾರು ಚಟುವಟಿಕೆಳನ್ನು ಮಾಡಿಸಿದರು. ಶಿಬಿರದಲ್ಲಿ 50 ಮಕ್ಕಳು ಭಾಗವಹಿಸಿದ್ದು, ಎಲ್ಲಾ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಂಡರು. ಮಕ್ಕಳಿಗೆ ತುಂಬಾ ಖುಷಿಯಾದ ಚಟುವಟಿಕೆಗಳೆಂದರೆ, ತಿಂಡಿ ಸಿದ್ಧಪಡಿಸುವುದು, ಬ್ಯಾಗ್‌ಗಳಿಗೆ ಬಣ್ಣ ಹಚ್ಚುವುದು.
ತುಮಕೂರಿನ ಹಕ್ಕಿ-ಪಕ್ಕಾ ಮಕ್ಕಳ ಬಳಗದ ಭೇಟಿ,
ಮೇ 1 ರಿಂದ 3, 2022 :
ಬಹುದಿನಗಳ ನಿರೀಕ್ಷೆಯಂತೆ ತುಮಕೂರಿನ ಹಕ್ಕಿ -ಪಕ್ಕ ಬಳಗದ ಮಕ್ಕಳು, ಗೀತಾ, ಯತೀಶ್, ಮೆಹಬೂಬ್ ಅವರ ಜೊತೆ ಮೇ 1 ರಿಂದ 3 ರವರೆಗೆ ಪುನರ್ಚಿತ್ ಗೆ ಭೇಟಿ ನೀಡಿದರು. ಮೊದಲ ದಿನ ಪುನರ್ಚಿತ್ ಅನಿಕೇತನದ ಹಿರಿಯ ಮಕ್ಕಳ ಜೊತೆ ಹವಾಮಾನ ಬದಲಾವಣೆ ಕುರಿತ ನಾಟಕ ಮೂಲಕ ಪರಿಚಯ ಮಾಡಿಕೊಂಡರು. 2 ನೇ ದಿನ ಬಿ.ಆರ್.ಹಿಲ್ಸ್ಗೆ ಭೇಟಿ ನೀಡಿದ್ದು, ಸಮೀರಾ ಅವರು ಸೋಲಿಗ ಸಂಘ ಮತ್ತು ಕನ್ನೇರಿಕಾಲೋನಿಯ ಜನರ ನೆರವಿನೊಂದಿಗೆ ಸೋಲಿಗರ ಕಾಡು ಮತ್ತು ಇತಿಹಾಸವನ್ನು ಪರಿಚಯಿಸಿದರು. ಮೂರನೇ ದಿನ ನಾಗವಳ್ಳಿ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಕೈ ತೋಟಗಳನ್ನು ವೀಕ್ಷಣೆ ಮಾಡಿದರು. ಹಕ್ಕಿ-ಪಕ್ಕ ಬಳಗದ ಮಕ್ಕಳು ತಾವೇ ಸಿದ್ಧಪಡಿಸಿದ ವಿಶೇಷ ಉಡುಗೊರೆಗಳನ್ನು ಪುನರ್ಚಿತ್ ತಂಡಕ್ಕೆ ನೀಡಿ ಖುಷಿಪಟ್ಟರು. ವಾಸವಿ ಮತ್ತು ಬದ್ರಿ ಮಕ್ಕಳಿಗೆ ಸಂವಹನ ಮತ್ತು ಸಾಮಾಜಿಕ ವಿಷಯಗಳ ಕುರಿತು ವಿಷಯ ಹಂಚಿಕೊAಡರು. ಮಕ್ಕಳು ತಮ್ಮ ಗ್ರಾಮಗಳಲ್ಲಿ ಕೆಲಸ ಮುಂದುವರಿಸಲು ಪ್ರೋತ್ಸಾಹಿಸಿದರು. ಮಕ್ಕಳು ನಾಗವಳ್ಳಿ ಮಕ್ಕಳು ಮತ್ತು ಪುನರ್ಚಿತ್ ಕೈ ತೋಟ ನೋಡಿ ಹೊಸ ಹೊಸ ವಿಧಾನಗಳ ಮೂಲಕ ಕೈ ತೋಟ ಮಾಡುತ್ತಿದ್ದು, ಗ್ರಾಮದ ಜನರು ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ.
ಅಂಗರಿಕೆ ಮಾಳದ ಕಟ್ಟಡ ಉದ್ಧಾಟನೆ,
ಏಪ್ರಿಲ್ 11, 2022 :
ಏಪ್ರಿಲ್ 11, 2022 ರಂದು ಅಂಗರಿಕೆ ಮಾಳ ಭೂಮಿಯಲ್ಲಿ ಕಟ್ಟಡ ನಿರ್ಮಾಣದ ಉದ್ಫಾಟನೆಯ ಹಿರಿಯರು ಹಾಗೂ ರೈತರಾದ ಪುಟ್ಟಸ್ವಾಮಿ ಅಣ್ಣ ನೆರವೇರಿಸಿಕೊಟ್ಟಿದ್ದು, ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಅಶೋಕ್, ಕಟ್ಟಡ ನಿರ್ಮಾತೃಗಳಾದ ಧನರಾಜ್ ಮತ್ತವರ ತಂಡ ಹಾಗೂ ಪುನರ್ಚಿತ್ ತಂಡ ಭಾಗವಹಿಸಿತು.
2020 ಕಾರ್ಯಕ್ರಮಗಳು