ಕೋವಿಡ್ 19 ರ ರೂಪಾಂತರದ ಪರಿಣಾಮ, 2021-22

ಕೋವಿಡ್ -19 ರ ಸಂದರ್ಭದಲ್ಲಿ ಪುನರ್ಚಿತ್ ಕೆಲಸಗಳು

2021-22

ಕೋವಿಡ್-19 ರ ಡೆಲ್ಟಾ ರೂಪಾಂತರ ಪರಿಣಾಮ ತಂಡದ ಹಲವು ಸದಸ್ಯರು ಮತ್ತು ಅವರ ಕುಟುಂಬದವರು ಅನಾರೋಗ್ಯಕ್ಕೆ ಒಳಾಗಾಗುವಂತೆ ಮಾಡಿತು. ಕೋವಿಡ್-19 ರ ಪರಿಣಾಮ ದೇಶ ಮತ್ತು ವಿಶ್ವವನ್ನು ಆವರಿಸಿದ್ದರಿಂದ ಹಲವಾರು ವ್ಯಕ್ತಿಗಳು ಮತ್ತು ಕುಟುಂಬಗಳು ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ಹಲವಾರು ವ್ಯಕ್ತಿಗಳಿಗೆ ಆಹಾರ, ವೈದ್ಯಕೀಯ ಮತ್ತು ಹಣಕಾಸಿನ ನೆರವನ್ನು ನೀಡಿದ್ದೇವೆ. ಮೇ 2 ರಂದು ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 32 ಜನ ಸಾವನ್ನಪ್ಪಿದರು. ನಾವು ವಾಸಿಸುವ ನಾಗವಳ್ಳಿ ಗ್ರಾಮದ ಇಬ್ಬರು ಯುವಕರು ಕೂಡ ಈ ದುರಂತದಲ್ಲಿ ಬಲಿಯಾಗಿದ್ದು, ಆ ಕುಟುಂಬಗಳ ದು:ಖದಲ್ಲಿ ಮುಳುಗಿದ್ದನ್ನು ನೋಡಿದ್ದೇವೆ. ಇದು ಸಾರ್ವಜನಿಕ ವ್ಯವಸ್ಥೆಯ ಕುಸಿತ ಮತ್ತು ಹತಾಶೆಗೊಂಡ ನಾಗರಿಕ ಸಮಾಜವು ಉತ್ತಮ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಕೆಲಸ ಮಾಡುವ ಅಗತ್ಯವನ್ನು ಎತ್ತಿ ತೋರಿಸಿದೆ.

ರಾಜ್ಯ ಮತ್ತು ಜಿಲ್ಲೆಯ ವಿವಿಧ ನೆವರ್ಕ್ ಮತ್ತು ಗುಂಪುಗಳೊಂದಿಗೆ ಪುನರ್ಚಿತ್ ಕೆಳಗಿನ ಬೆಂಬಲವನ್ನು ಒದಗಿಸಿದೆ :

ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆ ಕುರಿತು ಕರಪತ್ರವನ್ನು ವಿನ್ಯಾಸಗೊಳಿಸಿ, ಹಂಚಿಕೊಳ್ಳಲು ಸಿದ್ಧಪಡಿಸಲಾಯಿತು. ಈ ಕರಪತ್ರವನ್ನು ಚಾಮರಾಜನಗರ ಜಿಲ್ಲಾಡಳಿತವು ವಿತರಣೆ ಮಾಡಿತು ಮತ್ತು ರಾಜ್ಯದಾದ್ಯಂತ ಹಲವಾರು ಎನ್‌ಜಿಒಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್‌ಗಳಿಗೆ ವೈದ್ಯಕೀಯ ಉಪಕರಣಗಳು ಮತ್ತು ಸರಬರಾಜುಗಳ ನೆರವನ್ನು ನೀಡಲಾಗಿದೆ. ಶ್ರೀ ಅರುಣ್ ರಾಮನ್ ಅವರು ಜಿಲ್ಲಾ ಆಸ್ಪತ್ರೆಗೆ 19 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದರು.

ಪರಿತ್ಯಕ್ತ ಹಿರಿಯರು ಮತ್ತು ಹತಾಶ ಕುಟುಂಬಗಳಿಗೆ ಆಹಾರ ಕಿಟ್ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ.

ನಗರ ಪ್ರದೇಶದ ಶಾಲೆಗಳಿಂದ ಬಿಡಿಸಿ ಸ್ಥಳೀಯ ಶಾಲೆಗೆ ದಾಖಲಾದ ಮಕ್ಕಳಿಗೆ ಶಾಲಾ ಶುಲ್ಕ ಪಾವತಿಸಲಾಗಿದೆ.

ವಿಶೇಷವಾಗಿ ಪುನರ್ಚಿತ್ ಸಂಸ್ಥೆಯು 13 ಪಂಚಾಯಿತಿಗಳಲ್ಲಿ ಕೆರೆಗಳ ಪುನಶ್ಚೇತನಕ್ಕಾಗಿ ಎಂಎನ್‌ಆರ್‌ಇಜಿ ಕೆಲಸಗಳನ್ನು ಮಾಡಿಸಲು ಪ್ರೇರೆಪಿಸಲಾಗಿದೆ.

2021ರ ಲಾಕ್ ಡೌನ್ ಮತ್ತು ಕೋವಿಡ್ ಪರಿಹಾರ

ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಪ್ರಾರಂಭವಾಗಿ, ಏಪ್ರಿಲ್ 25, 2021 ರಿಂದ ಮತ್ತೇ ಲಾಕ್ ಡೌನ್ ಆಗುವುದರೊಂದಿಗೆ ನಾವು ನಮ್ಮ ಅನೇಕ ಚಟುವಟಿಕೆಗಳು ಮರು ಪರಿಷ್ಕರಿಸಿ ಸಂಘಟಿಸಬೇಕಾಯಿತು. ಮೇ ತಿಂಗಳಿನಿAದ ಕೋವಿಡ್ ಕಾಯಿಲೆಯನ್ನು ನಿಭಾಯಿಸುವ ಕುರಿತು ಮಾಹಿತಿಯನ್ನು ಒದಗಿಸಲು ಹಲವಾರು ನೆಟ್‌ವರ್ಕ್ ಮತ್ತು ಸಂಸ್ಥೆಗಳೊAದಿಗೆ ಸಹಕರಿಸಿದ್ದೇವೆ. ಅನೇಕರಿಗೆ ಜಿಲ್ಲಾ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರುಗಳಿಗೆ ಹೋಗಲು ಅನುವು ಮಾಡಿಕೊಟ್ಟಿದ್ದೇವೆ. ನಾಗವಳ್ಳಿ, ದೊಡ್ಡರಾಯಪೇಟೆ, ಕುಳ್ಳೂರು ಗ್ರಾಮಗಳ ಅನಾನುಕೂಲಕರ ಕುಟುಂಬಗಳಿಗೆ ಅಥವಾ ವ್ಯಕ್ತಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದೇವೆ. ಹೆಚ್ಚುವರಿಯಾಗಿ ನಾವು ಕೆಲವು ಕುಟುಂಬಗಳಿಗೆ ಕೋವಿಡ್ ಸಂಬAಧಿತ ಚಿಕಿತ್ಸೆ, ಪ್ರಯಾಣ ಅಥವಾ ಔಷಧಿಗಳ ಖರೀದಿಗಾಗಿ ಹಣಕಾಸಿನ ಬೆಂಬಲವನ್ನು ಒದಗಿಸಿದ್ದೇವೆ.

ಹಿಂದಿನ ವರ್ಷದಂತೆ ನಾವು ಜಿಲ್ಲೆಯ ಪ್ರವೃತ್ತಿಗಳು (ಟೆಂಡ್ಸ್), ಕೋವಿಡ್‌ಗೆ ಒಳಗಾದ ಜನರ ಅನುಭವಗಳನ್ನು ದಾಖಲಿಸುವುದನ್ನು ಮುಂದುವರಿಸಿದ್ದೇವೆ. ಕೋವಿಡ್‌ನ ಎರಡನೇ ಅಲೆಯ ತೀವ್ರತೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ಪುನರ್ಚಿತ್ ಸಂಸ್ಥೆಯು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸಲು ವೇದಿಕೆ ಮತ್ತು ಒತ್ತಡದ ಗುಂಪನ್ನು ಅಭಿವೃದ್ಧಿಪಡಿಸಲು ಜೆಲವು ಸಂಸ್ಥೆಗಳೊAದಿಗೆ ಸಂಭಾಷಣೆ ನಡೆಸುತ್ತಿದೆ.

ಲೇಖನಗಳು :

ದಿ ವೈರ್ : ಸಾಂಕ್ರಾಮಿಕ ಸುಳ್ಳಿನ ಸಮಯದಲ್ಲಿ ಕಳೆದುಹೋದ ಜೀವಗಳ ಹಿಂದೆ ಭಾರತದ ವಿಫಲ ಸಾರ್ವಜನಿಕ ಸಂಸ್ಥೆಗಳು

ಇಂಡಿಯನ್ ಎಕ್ಸ್ಪ್ರೆಸ್ : ಕೋವಿಡ್ ಮತ್ತು ಸಾಂಸ್ಥಿಕ ವೈಫಲ್ಯಗಳು ನಮ್ಮನ್ನು ಧ್ವಂಸಗೊಳಿಸುತ್ತಿರುವಾಗ, ನಾವು ಕಳೆದುಕೊಂಡಿದ್ದಕ್ಕಾಗಿ ದು:ಖ


ಕೊರೊನಾ ಲಾಕ್ ಡೌನ್ ಆಕಸ್ಮಿಕವಾಗಿ ಬಂದೆರಗಿದ ಆಪತ್ತಾಗಿದ್ದು, ಪುನರ್ಚಿತ್ ತಂಡ ನಗರ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನೆರವು ನೀಡುವ ಜೊತೆಗೆ ನಗರದಿಂದ ತಮ್ಮ ಹಳ್ಳಿಗೆ ವಾಪಸ್ಸಾದವರು ಮತ್ತು ರೈತರ ಸ್ಥಿತಿಗತಿ ಕುರಿತ ಅಧ್ಯಯನ, ಲಾಕ್ ಡೌನಿಂದ ಗ್ರಾಮೀಣ ಪ್ರದೇಶಗಳಲ್ಲಿ ತೊಂದರೆಗೆ ಸಿಲುಕಿದ ಹಿರಿಯರು, ವಿಧವೆಯರು, ಅನಾರೋಗ್ಯಕ್ಕೆ ತುತ್ತಾದವರಿಗೆ ನೆರವು, ಜಿಲ್ಲಾ ಮತ್ತು ಆಯ್ದ ಗ್ರಾಮ ಪಂಚಾಯತ್ ಜೊತೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಕೆಲಸಗಳ ಅನುಷ್ಟಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪರಿಹಾರ ಕೆಲಸಗಳು :

ಲಾಕ್‌ಡೌನ್ ಮೊದಲ ಹಂತದಲ್ಲಿ (ಏಪ್ರಿಲ್ 14 ರ ನಂತರ) ಪುನರ್ಚಿತ್ ತಂಡ ಆಯ್ದ ಹಳ್ಳಿಗಳಲ್ಲಿ ಕೊರೊನಾ ಸಮಸ್ಯೆ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೆಲಸ ಆರಂಭ ಮಾಡಿದ್ದು, ನಾಗವಳ್ಳಿ, ದೊಡ್ಡಮೋಳೆ ಮತ್ತು ಕುಳ್ಳೂರು ಗ್ರಾಮಗಳ ಹಲವು ಕುಟುಂಬಗಳಿಗೆ ಕೈ ತೊಳೆಯಲು ಸಾವಯವ ಸೋಪಗಳನ್ನು ನೀಡಲಾಗಿದೆ. ನಾಗವಳ್ಳಿ ಮತ್ತು ದೊಡ್ಡಮೋಳೆ ಗ್ರಾಮದ ಅಂಚಿನಲ್ಲಿರುವ ೬೦ ಕುಟುಂಬಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸಾಮಾಗ್ರಿಗಳನ್ನು ಹಂಚಲಾಗಿದೆ. ಇದರಲ್ಲಿ ೩೦ ಆಹಾರ ಕಿಟ್‌ಗಳನ್ನು ದೀನಬಂಧು ನೀಡಿದ್ದು, ಉಳಿದ ೩೦ ಕಿಟ್‌ಗಳನ್ನು ಪುನರ್ಚಿತ್ ಹೊಸದಾಗಿ ಆರಂಭಿಸಿರುವ ತುರ್ತು ಪರಿಹಾರ ನಿಧಿಯಿಂದ ಭರಿಸಲಾಗಿದೆ. ಪ್ರಸ್ತುತ ಹೊಸದಾಗಿ ಮಾಸ್ಕ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ (ಮಾಸ್ಕ್ ಸಿದ್ಧಪಡಿಸುವ ಬಟ್ಟೆಯನ್ನು ಡಾ.ನಾಗಾರ್ಜುನ ಅವರು ನೀಡಿದ್ದಾರೆ).

ಬೆಂಗಳೂರಲ್ಲಿ ತಂಡದ ಸ್ವಯಂ ಸೇವೆ :

ಸುಮ ಮತ್ತು ಸಮೀರಾ ಅವರು ದೂರವಾಣಿ ಮೂಲಕ ಸ್ವಯಂ ಸೇವಕರ ಸಂಪರ್ಕದಿಂದ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಬಿಹಾರ ಮತ್ತು ಒಡಿಸ್ಸಾದ ಯುವಜನ ವಲಸೆ ಕಾರ್ಮಿಕರು ಅವರ ಸ್ಥಳಗಳಿಗೆ ತಲುಪಲು ಮತ್ತು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ವಾಸವಿ ಅವರು ಮೂರು ಪೊಲೀಸ್ ಠಾಣೆಗಳ ಮೂಲಕ ಸ್ವಯಂ ಆಗಿ ಕೆಲಸ ಮಾಡಿದ್ದಾರೆ.

ಜಿಲ್ಲಾ ಮತ್ತು ಗ್ರಾಮೀಣ ಹಂತದ ಆಡಳಿತಾತ್ಮಕ ವ್ಯವಸ್ಥೆ ಜೊತೆ ಕೈ ಜೋಡಿಸುವಿಕೆ:

ಪುನರ್ಚಿತ್ ಚಾಮರಾಜನಗರ ಸಿಇಓ ಅವರ ಜೊತೆ ಮಾತನಾಡಿ ಎಂ.ಎನ್.ಆರ್.ಇ.ಜಿ ಕೆಲಸಗಳನ್ನು ನಾಗವಳ್ಳಿ, ದೊಡ್ಡಮೋಳೆ ಮತ್ತು ಅರಳಿಪುರದಲ್ಲಿ ಆರಂಭಿಸಲಾಗಿದೆ. ಮೇ ೨೭ ರ ವೇಳೆಗೆ ಕನಿಷ್ಟ ಒಂದು ವಾರದ ಕೆಲಸಗಳನ್ನು ಹಳ್ಳಿಯ ಜನರಿಗೆ ನೀಡಿದ್ದು, ಈ ಅವಧಿಯಲ್ಲಿ ೨೫೦೦ ಜನರು ಕೆಲಸ ಮಾಡಿದ್ದಾರೆ. ಗ್ರಾಮದ ಕೆರೆಗಳು, ಕೆರೆ ಸಂಪರ್ಕದ ಕಾಲುವೆಗಳು, ಸಾರ್ವಜನಿಕ ರಸ್ತೆಗಳಲ್ಲಿ ಕೆಲಸ ಮಾಡಿಸಲಾಗಿದೆ. ಹಾಗಾಗಿ ಹಲವು ಕೆರೆಗಳು ಈಗ ಬಿದ್ದ ಮಳೆಗೆ ಭರ್ತಿಯಾಗಿವೆ ಮತ್ತು ಆಗುತ್ತಿವೆ. ನಾಗವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಕಾರ್ಯದರ್ಶಿಗಳ ಜೊತೆ ಸಾರ್ವಜನಿಕ ರಸ್ತೆಗಳು, ಕೆರೆಗಳು ಮತ್ತು ಖಾಸಗಿ ಜಮೀನುಗಳಲ್ಲಿ ಮರಗಿಡಗಳನ್ನು ಹಾಕಿಸುವ ಕುರಿತು ಮಾತುಕತೆ ಆರಂಭಿಸಿದ್ದೇವೆ. ಗ್ರಾಮಗಳಿಗೆ ವಾಪಸ್ಸಾಗಿರುವ ಯುವಜನ ವಲಸಿಗರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿಗಳನ್ನು ನೀಡುವ ಕುರಿತು ಮಾತುಕತೆ ಮಾಡುತ್ತಿದ್ದೇವೆ.

ಲೇಖನಗಳು/ಪ್ರಕಟಣೆಗಳು :

ಕೋವಿಡ್ – 19 ಕುರಿತ ಲೇಖನಗಳು ಅಥವಾ ಪ್ರಕಣೆಗಳಲ್ಲಿ ಪುನರ್ಚಿತ್ ತಂಡ ತೊಡಗಿಸಿಕೊಂಡಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಕೆಳಕಂಡ ಅಂತರ್ಜಾಲದಲ್ಲಿ ನೋಡಬಹುದು.

ಸುನಿತಾ ರಾವ್, ಕೆರೆಕೊಪ್ಪ : (ಹೆಚ್ಚಿನ ವಿವರಗಳಿಗಾಗಿ)

ಗಾಯದ ಮೇಲೆ ಬರೆ : ಲಾಕ್ ಡೌನ್ ಅವಧಿಯಲ್ಲಿ ಗ್ರಾಮೀಣ ಕರ್ನಾಟಕ : ಕರ್ನಾಟಕದ 19 ಹಳ್ಳಿಗಳ ಸ್ಥಿತಿಗತಿ ಕುರಿತ ಲೇಖನಗಳ ಸಂಗ್ರಹ. ಸಂಪಾದಕರು ಕೆ.ಪಿ.ಸುರೇಶ ಮತ್ತು ಎ.ಆರ್.ವಾಸವಿ. ಕನ್ನಡದಲ್ಲಿ ಇರುವ ಲೇಖನಗಳ ಕುರಿತು ಅನ್‌ಲೈನ್ ಮ್ಯಾಗ್‌ಜೈನ್, RUTHUMANA.COM ನೋಡಿ.  (ಹೆಚ್ಚಿನ ವಿವರಗಳಿಗಾಗಿ)

ಆಂಗ್ಲಭಾಷೆಯಲ್ಲಿರುವ ಲೇಖನಗಳನ್ನು ಲಭ್ಯವಿರುವ ಪಿಡಿಎಫ್ ಫೈಲ್ ನೋಡಿ.

ಪುನರ್ಚಿತ್ ತಂಡದ ಸಮೀರಾ ಅಗ್ನಿಹೋತ್ರಿ, ಪಿ.ವೀರಭದ್ರನಾಯ್ಕ ಮತ್ತು ಸುಂದ್ರಮ್ಮ ಅವರು ಲೇಖನಗಳ ಲೇಖಕರಾಗಿದ್ದಾರೆ.

 

ಎ.ಆರ್. ವಾಸವಿ

ಕೊರೊನಾ ವೈರಸ್ ಲಾಕ್ ಡೌನ್. ಗ್ರಾಮೀಣ ಪ್ರದೇಶದ ಬಗ್ಗೆ ಕಾಳಜಿ ಇಲ್ಲದಿರುವುದು. (ಹೆಚ್ಚಿನ ವಿವರಗಳಿಗಾಗಿ)

ಆಹಾರ ಉತ್ಪನ್ನದ ಸರಪಳಿ ಪುನರಾಲೋಚನೆ ಮಾಡಬೇಕಿದೆ ಮತ್ತು ಸಣ್ಣ ರೈತರಿಗೆ ಅಧಿಕಾರ. (ಹೆಚ್ಚಿನ ವಿವರಗಳಿಗಾಗಿ)

ಬಬ್ಲು ಭಯ್ಯ ಕ್ಷಮಿಸುತ್ತೀಯಾ ನಮ್ಮನ್ನು? ಲೇಖನವನ್ನು ಕೆಳಗಿನ ಅಂತರ್ಜಾಲದಲ್ಲಿ ನೋಡಿ. (ಹೆಚ್ಚಿನ ವಿವರಗಳಿಗಾಗಿ)

ಮುಖ್ಯಮಂತ್ರಿ ಅವರಿಗೆ ಬಹಿರಂಗ ದೂರು ಪತ್ರ :

 ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಬೆಂಗಳೂರು ಮತ್ತು ಮೈಸೂರಿನ ವಿವಿಧ ವಲಯದ ಶಿಕ್ಷಣ ತಜ್ಞರು ಬಹಿರಂಗ ದೂರು ಪತ್ರವನ್ನು ಬರೆದಿದ್ದು, ಇದು ಪ್ರಜಾವಾಣಿ, ದಿ ಹಿಂದೂ ಮತ್ತು ಡೆಕನ್ ಹೆರಾಲ್ಡ್ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಇದರ ಸಂಘಟನೆ ಕೆಲಸವನ್ನು ವಾಸವಿ ಅವರು ಮಾಡಿದ್ದಾರೆ.

ಕನ್ನಡ ಆವೃತ್ತಿ ; ಇಂಗ್ಲಿಷ್ ಆವೃತ್ತಿ

ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧದ ದ್ವೇಷದ ಮಾತುಗಳ ಬಗ್ಗೆ ದೂರು :

ಲಾಕ್ ಡೌನ್ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹಲವಾರು ವೃತ್ತಪತ್ರಿಕೆಗಳು, ವಿದ್ಯುದಮಾನ ಸಂಪರ್ಕಗಳ ಆಂಕರ್‌ಗಳು ಮತ್ತು ಚುನಾಯಿತ ಪ್ರತಿನಿಧಿಗಳು ಧರ್ಮ ಆಧಾರಿತ ದ್ವೇಷದ ಮಾತುಗಳನ್ನು ಆಡುತ್ತಿದ್ದು, ಇದರ ವಿರುದ್ಧ ಯುವಜನ ಆಕ್ಟಿವಿಸ್ಟ್ ಮತ್ತು ವಕೀಲರು ಸೇರಿ ಕ್ಯಾಂಪೇನ್ ಮಾಡಲಾಗಿದೆ. ಈ ಕುರಿತು ವಿವರವಾದ ಕ್ಷೇತ್ರ ವರದಿಯನ್ನು ಸಿದ್ಧಪಡಿಸಲಾಗಿದ್ದು, ಕರ್ನಾಟದಕ ಮುಖ್ಯಮಂತ್ರಿಯವರಿಗೆ ದೂರು ಸಲ್ಲಿಸಿದ್ದು, ಈ ಬಗ್ಗೆ ಕ್ರಮ ತೆಗೆದುಕೊಂಡಿರುವ ಕುರಿತು ಯಾವುದೇ ಸುದ್ಧಿ ಇಲ್ಲ. ಕ್ಯಾಂಪೇನ್ ಮೂಲಕ ವಾಸವಿ (ಕ್ಯಾಂಪೇನ್ ನೆಟ್‌ವರ್ಕ್ ಮತ್ತು ಸ್ವಾತಿ ಶೇಷಾದ್ರಿ ಸೇರಿದಂತೆ) ಅವರು ಕರ್ನಾಟಕ ಹೈ ಕೋರ್ಟ್‌ಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು. ಈ ದೂರಿನ ಪರವಾಗಿ ಸಂವಾದ ಸಹವರ್ತಿ ಹರೀಶ್ ನರ್ಸಪ್ಪ ವಾದಿಸಿದರು. ಆದರೆ ಈ ದೂರನ್ನು ನ್ಯಾಯಮೂರ್ತಿಗಳು (ಅಲ್‌ಲೈನ್ ಪ್ರಜೆಂಟೇಷನ್) ವಜಾಗೊಳಿಸಿದರು.