ಸಮೀರಾ ಅಗ್ನಿಹೋತ್ರಿ
ಸಮೀರಾ ಅಗ್ನಿಹೋತ್ರಿ : ಇವರು ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣೆ (‘Wildlife Biology and Conservation’) ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು WCS India – National Centre for Biological Sciences programme ನಿಂದ ಪಡೆದಿದ್ದಾರೆ. ಇವರು ಕರ್ನಾಟಕದ ದಕ್ಷಿಣ ಭಾಗದ ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಓಡಾಡಿಪಕ್ಷಿಗಳ ಧ್ವನಿ /ಹಾಡನ್ನು ಮೈಕ್ ಮತ್ತು ರೆಕಾರ್ಡರ್ ಹಿಡಿದು ದಾಖಲು ಮಾಡಿದ್ದಾರೆ. ಇವರು ನೂರಕ್ಕೂ ಹೆಚ್ಚು ಪಕ್ಷಿಗಳ ಹಾಡನ್ನು ದಾಖಲು ಮಾಡಿದ್ದು, ಕನ್ನಡ ಮತ್ತು ಇಂಗ್ಲೀಷ್ನ ಎರಡೂ ಭಾಷೆಯಲ್ಲೂ ಸಿ.ಡಿ ಮಾಡಿದ್ದಾರೆ. ಇವರು ಪರಿಸರ ವಿಜ್ಞಾನದಲ್ಲಿ ಬಹಳ ಮುಖ್ಯವಾದ ಪಕ್ಷಿ ರಾಕೇಟ್ ಟೈಲ್ಡ್ ಡ್ರೋಂಗೋ ಮೇಲೆ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್ ವಿಭಾಗದಿಂದ ಪಡೆದುಕೊಂಡಿದ್ದಾರೆ.ಇವರು ಸಂರಕ್ಷಣೆಯ ಶಿಕ್ಷಣ ವಿಷಯದಲ್ಲಿ ಆಸಕ್ತಿ ಹೊಂದಿದ್ದು, ಬೇರೆ ಬೇರೆ ದಾರಿಗಳ ಮೂಲಕ ಪರಿಸರ ವಿಜ್ಞಾನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಜ್ಞಾನ ಮತ್ತು ಮೌಖಿಕ ಇತಿಹಾಸದ ಸಂರಕ್ಷಣೆಯನ್ನು ಪ್ರೋತ್ಸಾಹಿಸುತ್ತಾರೆ. ಭಾಷಾಶಾಸ್ತ್ರದ ಪರಿಕಲ್ಪನೆಗಳನ್ನು ಹಕ್ಕಿ ಹಾಡಿಗೆ ಅಳವಡಿಸುವುದರ ಬಗ್ಗೆ ಬೇಸರವಿದೆ.
ಪುನರ್ಚಿತ್ಲ್ಲಿ ಪರಿಸರ ವಿಷಯ ಬೋಧನೆ ಜೊತೆಗೆ ಅರಣ್ಯ ಭೂಮಿ ಮತ್ತು ಸಂಬಂಧಗಳನ್ನು ಅರ್ಥಮಾಡಿಕೊಳ್ಳಬೇಕಾದ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತಾರೆ.ಅರಣ್ಯ ಜೀವನವನ್ನು ಅರ್ಥಮಾಡಿಕೊಳ್ಳಲು ಕಾಡಿಗೆ ಕರೆದುಕೊಂಡು ಹೋಗಿ ಕೇಳಿಸಿಕೊಳ್ಳುವುದಕ್ಕೆ ಮುಖ್ಯತೆ ಕೊಡುತ್ತಾರೆ. ಇವರು ಬಿ.ಆರ್.ಹಿಲ್ಸ್ನ ತಮ್ಮ ಕಲಿಕೆಯನ್ನು ಹಂಚಿಕೊಳ್ಳಲು ಪುನರ್ಚಿತ್ ಸಹಯೋಗದಲ್ಲಿದ್ದಾರೆ.ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಯುವಜನರನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತಿದ್ದಾರೆ.