ಸಮಗ್ರ ಕಲಿಕಾ ಕಾರ್ಯಕ್ರಮ
ಅಭಿವೃದ್ಧಿಪಡಿಸಬೇಕು ?
(1) ಕೃಷಿ ಮತ್ತು ಪರಿಸರ
(2) ಸಾಮಾಜಿಕ ವಿಷಯಗಳು
(3) ಪೌರತ್ವ
(4) ಸಾಮಾನ್ಯ ಕೌಶಲ್ಯಗಳು: ಆಂಗ್ಲಭಾಷೆ, ಕಂಪ್ಯೂಟರ್, ಲೆಕ್ಕಚಾರ
ಸಾಮಾಜಿಕ ಪರಿವರ್ತನೆಯ ಕಲಿಕೆ ಮತ್ತು ಸ್ಥಳೀಯ ಜ್ಞಾನವೃದ್ಧಿ. ನಾಟಕ, ಹಾಡು ಮತ್ತು ಕಲೆಯ ಮೂಲಕ ವೈಯಕ್ತಿಕ ಬೆಳವಣಿಗೆ, ಆತ್ಮವಿಶ್ವಾಸ, ಸಂವಹನ ಮತ್ತು ನಾಯಕತ್ವದ ಕೌಶಲ್ಯಗಳನ್ನು ಬೆಳಸಲಾಗುತ್ತದೆ.
೬ನೇ ಹಂತದ ಸಮಗ್ರ ಕಲಿಕಾ ತರಬೇತಿಯ ಯುವಜನ ಕಲಿಕಾರ್ಥಿಗಳು ಜುಲೈನಲ್ಲಿ ಸೇರಿ ಡಿಸೆಂಬರ್ ೨೦೧೮ ಕ್ಕೆ ಪೂರ್ಣಗೊಳಿಸಿದರು. ಈ ತಂಡವು ತರಬೇತಿ ಪ್ರಕ್ರಿಯೆಯಲ್ಲಿ ಬಹಳ ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರು. ಚಾಮರಾಜನಗರ ಜಿಲ್ಲೆ ಹೊರತುಪಡಿಸಿ ಇತರೆ ಎರಡು ಜಿಲ್ಲೆಯ ಯವಜನರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಮುಂದೆ ಐಎಲ್ಪಿ ತರಬೇತಿಯನ್ನು ವಸತಿ ಸಹಿತವಾಗಿ ಮಾಡಲು ಯೋಜಿಸಿದ್ದು, ಈ ಕಲಿಕಾ ತರಬೇತಿಗೆ ಇತರೆ ಜಿಲ್ಲೆಯ ಯುವಜನರನ್ನು ಸೇರಿಸಿಕೊಳ್ಳಲು ಚಿಂತಿಸಲಾಗಿದೆ. ತರಬೇತಿ ಪೂರ್ಣಗೊಳಿಸಿದ ಹಲವರು ಹೊನ್ನೇರು ಯುವಜನ ಗ್ರಾಮೀಣ ಒಕ್ಕೂಟದ ಸದಸ್ಯರಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮಗ್ರ ಕಲಿಕೆ ಕಾರ್ಯಕ್ರಮದಲ್ಲಿ ಇರಬೇಕಾಗಿರುವುದು ಗ್ರಾಮೀಣ ಯುವಜನರ ಅವಶ್ಯಕತೆಗಳನ್ನು ಗುರುತಿಸಿ ಆ ಮೂಲಕ ಸುಸ್ಥಿರತೆ ಜೊತೆ ಬಹುಜ್ಞಾನ ಕಲಿಕೆಯ ಸಾಮರ್ಥ್ಯವೃದ್ಧಿ, ತಾಂತ್ರಿಕತೆ, ಬಂಡವಾಳ, ಪೌರತ್ವ, ಸಮಾಜ ಮತ್ತು ಶ್ರಮದ ಬಗ್ಗೆ ಹೇಳಿಕೊಡುವ ಬೋಧನಾ ವಿಧಾನದಗಳು ಇರಬೇಕು.
ಈವರೆಗೆ ಆರು ತಂಡದ ತರಬೇತಿ ನೀಡಲಾಗಿದೆ. ಹೊಸ ಬೋಧನಾ ವಿಧಾನದ ಮೂಲಕ ಬೋಧನಾ ಕಲಿಕಾ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇತರೆ ಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆಗಳ ಜೊತೆ ಹಂಚಿಕೊಳ್ಳಲಾಗುವುದು.
“ಹಿಂಜರಿಕೆ ಮತ್ತು ಹೆದರಿಕೆ ಹೋಗಿದೆ. ಆತ್ಮವಿಶ್ವಾಸ ವೃದ್ಧಿಸಿದೆ. ಸ್ನೇಹ ಹಾಗೂ ಸಹಕಾರ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗಿದೆ.”
“ಬೌದ್ಧಿಕ ಹಾಗೂ ಪ್ರಶ್ನಿಸುವ ಸಾಮರ್ಥ್ಯ, ಹೊಸ ವಿಷಯಗಳ ಬಗ್ಗೆ ಆಲೋಚನೆ ಮತ್ತು ಅರ್ಥಮಾಡಿಕೊಂಡು ಹೇಗೆ ಬೆಳೆಯುವುದು ಎಂಬುದನ್ನು ಕಲಿತೆ.”
“ಹಿಂದೆ ಶಾಲೆ ಕಲಿಕೆ ಅಂಕಗಳನ್ನು ಪಡೆಯಲು ಮಾತ್ರ ಎನ್ನುವಂತಾಗಿತ್ತು. ನಮ್ಮ ಜೀವನದ ಬಗ್ಗೆ ಕಲಿಯಲು ಸಾಧ್ಯವಿದೆ. ನಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ ಇಲ್ಲಿ. ಮೂರು ವರ್ಷಗಳು ಕಾಲೇಜಿನಲ್ಲಿ ಕೆಲಸ ಮಾಡಿದ ಅನುಭವ ಮತ್ತು ನನೆಗೆ ಆದ ಸಂಕಟಗಳ ಬಗ್ಗೆ ಹೇಳಿಕೊಳ್ಳುವ ಅವಕಾಶಗಳೇ ಸಿಗಲಿಲ್ಲ. ಆ ಸಮಯದಲ್ಲಿ ಕೇವಲ ಹಣಕಾಸಿಗೆ ಪ್ರಾಮುಖ್ಯತೆ ನೀಡಿದೆ.ಆದರೆ ನಾನು ಇಲ್ಲಿ (ಸಮಗ್ರ ಕಲಿಕೆಯಲ್ಲಿ) ಶಾಲೆಯಲ್ಲಿ ನಾನು ಏನನ್ನು ಕಲಿಯಲು ಸಾಧ್ಯವಾಗಿಲ್ಲವೋ ಅದನ್ನು ಇಲ್ಲಿ ನಾನು ಕಲಿತಿದ್ದೇನೆ. ಈಗ ನನ್ನ ಜೀವನ ಮತ್ತು ಗುರಿಯ ಬಗ್ಗೆ ಯೋಚಿಸುತ್ತಿದ್ದೇನೆ.”
“ನಾನು ಈ ಕಾರ್ಯಕ್ರಮದಲ್ಲಿ ಏನು ಕಲಿತಿದ್ದೇನೆ ಎಂಬುದನ್ನು ನನ್ನ ಕುಟುಂಬದವರು, ಸ್ನೇಹಿತರ ಜೊತೆ ಹಂಚಿಕೊಂಡಿದ್ದೇನೆ. ಅವರಿಗೆಲ್ಲಾ ನನ್ನನ್ನು ನೋಡಿ ಆಶ್ಚರ್ಯ ಮತ್ತು ಖುಷಿಯಾಯಿತು.”
“ನಾವು ನೋಡಿಲ್ಲದ ಸ್ಥಳದಲ್ಲಿ ಹೋಗಿ ಕೆಲಸ ಮಾಡುವ ಬದಲು ನಮ್ಮ ಹಳ್ಳಿಯಲ್ಲೇ ಕೆಲಸ ಮಾಡುವುದು ಉತ್ತಮ.”
“ಪಠ್ಯಪುಸ್ತಕ ಮೂಲಕ ಕಲಿಯುವ ಬದಲಿಗೆ ಇಲ್ಲಿ ಪುಸ್ತಕವಿಲ್ಲದೆ ನಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಕಲಿತೆ.”
“ಕುಟುಂಬದಲ್ಲಿ ಮಹಿಳೆಯರು ಎಲ್ಲ ರೀತಿಯ ಶ್ರಮದ ಕೆಲಸ ಮಾಡುತ್ತಾರೆ ಎಂಬುದು ಈಗ ನನಗೆ ಅರ್ಥವಾಗಿದೆ. ಮನೆ ಬಳಕೆಗಾಗಿ ನೀರು ತರುವುದು ಮತ್ತು ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದನ್ನು ನಾನು ಇಲ್ಲಿ ಕಲಿತೆ.”
“ದೂರದರ್ಶನದಲ್ಲಿ ಧಾರವಾಹಿಗಳನ್ನು ನೋಡಲು ಕಾಯುವಂತೆ, ಸಮಗ್ರ ಕಲಿಕಾ ತರಗತಿಗೆ ಬರುವುದಕ್ಕೆ ಕಾಯುತ್ತಿದ್ದೆ… ”
“ಅವಳು ನಾಚಿಕೆ ಮತ್ತು ಅಂತರ್ಮುಖಿ ಹುಡುಗಿಯಾಗಿದ್ದಳು. ಈಗ ಅವಳ ಅಪರಿಚಿತರೂ ಸೇರಿದಂತೆ ಎಲ್ಲರೊಡನೆ ಮಾತನಾಡುತ್ತಾಳೆ.”
“ಪುನರ್ಚಿತ್ಗೆ ಹೋಗಲು ಅವರು ಕಾಯುತ್ತಿರುತ್ತಾರೆ.ಇದು ಬೇರೆ ಕಾರ್ಯಕ್ರಮಗಳ ತರಹ ಅಲ್ಲ. ನಾವು ಕೂಡ ಅಲ್ಲಿಗೆ ಹೋಗಿ ಏನು ಮಾಡುತ್ತಾರೆ ಎಂದು ನೋಡಬಹುದು.”