ಮುಖ್ಯ ತಂಡ
ಪಿ. ವೀರಭದ್ರನಾಯ್ಕ (ಬದ್ರಿ)
ಮುಖ್ಯ ತಂಡ
ಪಿ. ಶ್ರೀನಿವಾಸ ವಾಸು
ಮುಖ್ಯ ತಂಡ
ಇವರು ಪುನರ್ಚಿತ್ನಲ್ಲಿ ಸುಸ್ಥಿರ ಕೃಷಿ ಬೋಧನೆ ಮತ್ತು ಬೋಧನಾ ಸಾಮಾಗ್ರಿಗಳ ಅಭಿವೃದ್ಧಿಪಡಿಸುವಲ್ಲಿ ಹಾಗೂ ಯುವ ಕಲಿಕಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮಾದರಿಗಳನ್ನು (ಪ್ಲಾಟ್) ಮಾಡುಲು ನೆರವು ನೀಡುತ್ತಾರೆ.
ಎಚ್.ಮುತ್ತುರಾಜು
ಮುಖ್ಯ ತಂಡ
ಎಚ್. ಸುಮ
ಮುಖ್ಯ ತಂಡ
ಪುನರ್ಚಿತ್ಲ್ಲಿ ಇವರು ಲೆಕ್ಕಚಾರಗಳನ್ನು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಸಮಗ್ರ ಕಲಿಕಾ ಕಾರ್ಯಕ್ರಮದಲ್ಲಿ ಲೆಕ್ಕಚಾರದ ವಿಷಯಗಳನ್ನು ಬೋಧನೆ ಮಾಡುತ್ತಿದ್ದಾರೆ. ಇವರ ಬೋಧನಾ ವಿಧಾನದಲ್ಲಿ ಯುವಜನರು ಲೆಕ್ಕಚಾರದ ಜೊತೆ ತೀರ್ಮಾನ ತೆಗೆದುಕೊಳ್ಳುವುದು, ಖರ್ಚು ವೆಚ್ಚದ ಬಗ್ಗೆ ವಿಮರ್ಶಾತ್ಮಕವಾಗಿ ಆಲೋಚಿಸುವುದನ್ನು ಕಲಿಸುತ್ತಾರೆ.ಪರಿಸರದ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಯಾಗಿದ್ದು, ಕೈತೋಟ ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಮೂಲಕ ಖಷಿಪಡುತ್ತಾರೆ.
ಸಮೀರಾ ಅಗ್ನಿಹೋತ್ರಿ
ಮುಖ್ಯ ತಂಡ
ದ್ವಿಜೇಂದ್ರನಾಥ್ ಗುರು
ಮುಖ್ಯ ತಂಡ
ಪುನರ್ಚಿತ್ನ ಸಮಗ್ರ ಕಲಿಕಾ ಕಾರ್ಯಕ್ರಮದಲ್ಲಿ ಸಿರಿಧಾನ್ಯ ವಿಷಯಗಳಲ್ಲಿ ಬೋಧನೆ ಮತ್ತು ಸಾಮಾಗ್ರಿಗಳ ಅಭಿವೃದ್ಧಿಪಡಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.ವಿದರ ಜತೆಯಲ್ಲಿ ಚಾಮರಾಜನಗರದ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸಲು ಮತ್ತು ಸಂಸ್ಕರಣೆಯನ್ನು ಮಾಡುವ ಬಗ್ಗೆ ಪುನರ್ಚಿತ್ಗೆ ಸಲಹೆ ನೀಡುತ್ತಿದ್ದಾರೆ.
ವಿನಯ್ ಕೆ.ಕುಮಾರ್
ಮುಖ್ಯ ತಂಡ
ವಿನಯ್ ಕೆ ಕುಮಾರ್ ತೆಲಂಗಾಣದವರಾಗಿದ್ದು, ಬಹುಭಾಷಾ ಕೌಶಲ್ಯಗಳನ್ನು ಹೊಂದಿದ್ದು, ಅಲೆಮಾರಿ ಸೈಕ್ಲಿಸ್ಟ್. ಇವರು ಎನ್ಐಟಿಕೆ ಸುರತ್ಕಲ್ನಿಂದ ಸಿವಿಲ್ ಎಂಜನಿಯರಿಂಗ್ಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಪದವಿಯ ನಂತರ ಪರಿಸರ ಮತ್ತು ಸಮಾಜದ ಸ್ಥಿತಿಯ ಬಗ್ಗೆ ತಿಳಿಯುವ ಸಲುವಾಗಿ ಅವರ ಆಸಕ್ತಿಯು ಕಲಿಕೆ ಮತ್ತು ಜೀವನದಲ್ಲಿ ಪರ್ಯಾಯಗಳನ್ನು ಹುಡುಕುವಂತೆ ಮಾಡಿದೆ. ಸೈಕಲ್ ಸವಾರಿ ಮೂಲಕ ಕೇರಳ, ತಮಿಳುನಾಡಿನ ಗ್ರಾಮೀಣ ಜೀವನ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಫೋಟೋ ಮೂಲಕ ದಾಖಲಿಸುವ ಕೆಲಸ ಮಾಡಿದ್ದಾರೆ. ಪುನರ್ಚಿತ್ಲ್ಲಿ ಅಂಗರಿಕೆ ಮಾಳದ ಕೃಷಿ, ಕಟ್ಟಡ ನಿರ್ಮಾಣ ಮತ್ತು ಸಂರಕ್ಷಣಾ ಕೆಲಸಗಳು, ಬೀಜ ಬ್ಯಾಂಕ್, ಹವಾಮಾನ ಬದಲಾವಣೆಯ ವಿಷಯಗಳ ಹಂಚಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ದೀರ್ಘಾವಧಿಯಲ್ಲಿ ಅವರು ನಮ್ಮ ಮಾಹಿತಿಯ ಮೂಲಕ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ನಡೆಯಲು ಚಿಂತಿಸಿದ್ದಾರೆ.
ಸುಂದ್ರಮ್ಮ
ಮುಖ್ಯ ತಂಡ
ಸುಂದ್ರಮ್ಮ ಅವರು ಪುನರ್ಚಿತ್ ತಂಡಕ್ಕೆ ಹೊಸದಾಗಿ ಸೇರಿದ್ದು, ಸಮುದಾಯದ ಚಟುವಟಿಕೆಗಳು ಹಾಗೂ ಔಟ್ರೀಚ್ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಅವರು ಪದವಿ ಶಿಕ್ಷಣವನ್ನು ಪಡೆದಿದ್ದು, ಮಹಿಳಾ ಸಮಖ್ಯಾದಲ್ಲಿ ಇಪ್ಪತ್ತು ವರ್ಷಗಳ ಅನುಭವ ಪಡೆದುಕೊಂಡಿದ್ದಾರೆ. ಇವರು ಸೂಕ್ಷ್ಮ ಅವಲೋಕನಕಾರರಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಕಾರ್ಯಾಗಾರಗಳನ್ನು ಮೂಲಕ ಅವರನ್ನು ಮನವೊಲಿಸುವ ಕೆಲಸದಲ್ಲಿ ಖುಷಿಯಾಗಿದ್ದಾರೆ.
ಮಹೇಂದ್ರ .ಎನ್.
ಮುಖ್ಯ ತಂಡ
ಶೈಲಾ
ಮುಖ್ಯ ತಂಡ
ಮನುಜಪ್ರಿಯಾ
ಮುಖ್ಯ ತಂಡ
ಮನುಜಪ್ರಿಯಾ ಐಎಲ್ಪಿ ಕೋರ್ಸ್ನ ಹಳೆಯ ವಿದ್ಯಾರ್ಥಿ. ಬಿ.ಎ. ಮತ್ತು ಡಿ.ಎಡ್. ಪದವಿಗಳನ್ನು ಪಡೆದಿದ್ದು, ಎಲ್ಲಾ ಕೆಲಸಗಳಲ್ಲಿ ಉತ್ಸುಕರಾಗಿ ಭಾಗಿವಹಿಸುತ್ತಾರೆ. ಮಕ್ಕಳ ಕಾರ್ಯಕ್ರಮ ಮತ್ತು ಹೋನ್ನೇರು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಎರಡು ಮಕ್ಕಳ ತಾಯಿಯಾಗಿರುವ ಅವರು ಸಿದ್ದಯ್ಯನಪುರ ಗ್ರಾಮದಿಂದ ನಾಗವಳ್ಳಿಗೆ ಬರುತ್ತಿದ್ದಾರೆ.
ಬಿ. ವಸಂತ ಕುಮಾರಿ
ಮುಖ್ಯ ತಂಡ
ಬಿ.ವಸಂತ ಕುಮಾರಿ ನಾಗವಳ್ಳಿ ಗ್ರಾಮದವರಾಗಿದ್ದು, ವೃತ್ತಿತರಬೇತಿ ಪಡೆಯುತ್ತಿರುವ ಇಬ್ಬರು ಮಕ್ಕಳ ತಾಯಿ. ಇವರು ಕೆಲಸ ಕಾರ್ಯಗಳನ್ನು ಬಹಳ ಶ್ರದ್ದೆಯಿಂದ ಮಾಡುತ್ತಾರೆ. ಅಡುಗೆ ಮನೆ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಪುನರ್ಚಿತ್ ಕೆಲಸಗಳಿಗೆ ನೆರವಾಗುತ್ತಾರೆ. ಹೊನ್ನೇರು : ದಿ ರೂರಲ್ ಕಲೆಕ್ಟಿವ್ನ ಸಕ್ರಿಯ ಸದಸ್ಯೆಯೂ ಆಗಿದ್ದಾರೆ.
ಚಂದ್ರಕಾಂತ ಬಿ.ಆರ್.
ಮುಖ್ಯ ತಂಡ
ಚಂದ್ರಕಾಂತ ಬಿ.ಆರ್. ಅವರಿಗೆ ಕೃಷಿ, ಸಂಗೀತ ಮತ್ತು ಕಂಪ್ಯೂಟರ್ ಕಲಿಕೆ ಮತ್ತು ಬಳಕೆಯಲ್ಲಿ ಆಸಕ್ತಿ ಇದೆ. ಇವರು ಹೊನ್ನೇರು ಮಾರುಕಟ್ಟೆ ವಿಷಯಗಳ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಹೊನ್ನೇರು ಗ್ರಾಮೀಣ ಉತ್ಪಾದಕರ ಒಕ್ಕೂಟಕ್ಕೆ ನೆರವು ನೀಡುತ್ತಾರೆ. ಮಕ್ಕಳು ಮತ್ತು ತಂಡಕ್ಕೆ ಸಂಗೀತವನ್ನು ಹೇಳಿಕೊಡುತ್ತಾರೆ.
ಸಿದ್ಧಾರ್ಥ್ ಜೋಶಿ
ಮುಖ್ಯ ತಂಡ
ಮೆಕ್ಯಾನಿಕಲ್ ಎಂಜಿನಿಯರಿಂಗ್ (ಐಐಟಿ ಮುಂಬೈ) ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಸಹವರ್ತಿಯಾಗಿದ್ದರು. ಅವರ ಹಿತಾಸಕ್ತಿಗಳು ಸಮಕಾಲೀನ ರಾಜಕೀಯ ಆರ್ಥಿಕತೆ ಮತ್ತು ನ್ಯಾಯಕ್ಕಾಗಿ ಸಾಮಾಜಿಕ ಬದಲಾವಣೆಯಲ್ಲಿದೆ. ಅವರು ಹಲವಾರು ಮಾನವ ಹಕ್ಕುಗಳ ಗುಂಪುಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಮತ್ತು ಹವಾಮಾನ ಬದಲಾವಣೆಯ ದತ್ತಾಂಶ ಸಂಗ್ರಹಣೆ ಮತ್ತು ಪುನಾರ್ಕಿತ್ಗಾಗಿ ಸಂಸ್ಕರಣೆ ಮಾಡುತ್ತಾರೆ.
ಲಕ್ಷ್ಮಿ ಎಂ
ಮುಖ್ಯ ತಂಡ
ಲಕ್ಷ್ಮಿ ಎಂ ಬಿಸಿನೆಸ್ ಮ್ಯಾನೇಜ್ಮೆಂಟ್ಲ್ಲಿ (ಬಿಬಿಎಂ) ಪದವಿ ಪಡೆದಿದ್ದಾರೆ ಮತ್ತು ಕಳೆದ ೪ ವರ್ಷಗಳಿಂದ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ರಕೃತಿ ಛಾಯಗ್ರಹಣ ಮತ್ತು ವಿಡಿಯೋಗ್ರಫಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರ ಸಾಂಪ್ರದಾಯಿಕ ಪರಿಸರ ಜ್ಞಾನ, ಸಂರಕ್ಷಣಾ ಅಭ್ಯಾಸಗಳ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ತನ್ನ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಪುಸ್ತಕ ಮತ್ತು ಲೇಖನಗಳನ್ನು ಓದಲು ಇಷ್ಟಪಡುತ್ತಾರೆ.